ತುಮಕೂರು: ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ ಬರಿಗೈಯಲ್ಲಿ ಬಂದಿರೋದು ನೋಡುದ್ರೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ನವರ ಬದಲಾವಣೆಯ ಮುನ್ಸೂಚನೆಯಾಗಿದೆ ಎಂದು ಕೆಎನ್ಆರ್ ಹೇಳಿಕೆ ನೀಡಿದರು, ಯಡಿಯೂರಪ್ಪ ನವರನ್ನೇ ಮುಂದುವರೆಸೋದಿದ್ರೆ ಅವರ ಲಿಸ್ಟ್ ಗೆ ಅನುಮತಿ ಸಿಗಬೇಕಿತ್ತು,
ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರದ ಮಂತ್ರಿ ಅಮಿತ್ ಶಾ ಅವರನ್ನ ಭೇಟಿ ಮಾಡಲು ಸಮಯ ಕೇಳಿದ್ರು ಅವರ ಭೇಟಿಗೆ ಅವಕಾಶ ಕೊಡುವುದಿಲ್ಲ ಅಂದ್ರೆ ಇದು ನಮ್ಮ ಕರ್ನಾಟಕ ಜನತೆಗೆ ಮಾಡಿದ ಅವಮಾನ, ಇದು ನಿಜಕ್ಕೂ ಖಂಡನೀಯ. 103ನೇ ಶ್ರಿಮತಿ ಇಂದಿರಾಗಾಂಧಿ ಜನ್ಮದಿನಾಚರಣೆ ಅಂಗವಾಗಿ ಪುಪ್ಪನಮನ ಕಾಯಕ್ರಮದಲ್ಲಿ ಮಾಜಿ ಶಾಸಕ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದರು.