ಗುಬ್ಬಿ: ಶಾಲೆಯ ಕಟ್ಟಡ ತೆರವುಗೊಳಿಸುವಂತೆ ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ | ವಿಶ್ವ ಕನ್ನಡಿ

ಗುಬ್ಬಿ: ಪಟ್ಟಣದಲ್ಲಿರುವ ವಿವೇಕಾನಂದ ವಿದ್ಯಾಪೀಠ ಶಾಲೆಯು 220 ಮತ್ತು 110 ಕೆವಿ ಅಧಿಕ ಒತ್ತಡವಿರುವ ವಿದ್ಯುತ್ ತಂತಿ ಹಾದು ಹೋಗಿದ್ದು ಇದರ ಅಡಿಯಲ್ಲಿರುವ ಶಾಲಾ ಕಟ್ಟಡದಲ್ಲಿ ವ್ಯಾಸಂಗಮಾಡುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಲ್ಲದೇ ಈ ಶಾಲೆಯ ಆಡಳಿತ ಮಂಡಳಿ ಈ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ನಡೆಸುತ್ತಿದ್ದು ಯಾವುದೇ ರೀತಿಯ ಭೂಪರಿವರ್ತನೆಯಾಗದ ಜಾಗದಲ್ಲಿ ಶಾಲೆ ನಡೆಸುತ್ತಿದ್ದು ಕಳೆದ 15 ವರ್ಷದಿಂದಲೂ ಈ ಶಾಲೆಯ ವಿರುದ್ಧ ವಿವಿಧ ಸಂಘ, ಸಂಸ್ಥೆಗಳಿಂದ ಶಾಲೆಯನ್ನು ತೆರವುಗೂಳಿಸುವಂತೆ ಹೋರಾಟಗಳು ನಡೆಯುತ್ತಿವೆ ಆದರೆ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಲು ಯಾವುದೇ ರೀತಿಯ ಕ್ರಮ ಜರುಗಿಸದೆ ಶಾಲಾ ಆಡಳಿತದ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಇಂದು ಗುಬ್ಬಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ವಾಹನ ಚಾಲಕ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್ ಕುಮಾರ್, ಪ್ರದಾನ ಕಾರ್ಯದರ್ಶಿ ಸಂಜಯ್ ಸಂಘಟನಾ ಕಾರ್ಯದರ್ಶಿ ಹರೀಶ್, ತಾಲೂಕು ಅಧ್ಯಕ್ಷ ವಿನಯ್, ಸಾಮಾಜಿಕ ಸಿ.ಆರ್.ಶಂಕರ್ ಕುಮಾರ್, ಹೋರಾಟಗಾರ ನಾಗಸಂದ್ರ ವಿಜಯ್ ಕುಮಾರ್, ಮಂಜುನಾಥ್ ಸಂಘಟನೆಯ ಸದಸ್ಯರಾದ ಮಧು, ವಾಸು, ಮಾಳೆ ಶಿವು, ಅಖಿಲ್, ರಂಗನಾಥ್