ರಾಜ್ಯದಲ್ಲಿ ಸದ್ದು ಮಾಡ್ತಿರೊ ಸಿಡಿ ಪ್ರಕರಣ | ವಿಶ್ವನಾಥ್ ಹತ್ರ ಸಿಡಿ ಇದ್ದೆ ಇರುತ್ತೆ: ಟಿ.ಬಿ.ಜಯಚಂದ್ರ | ವಿಶ್ವ ಕನ್ನಡಿ

ರಾಜ್ಯದಲ್ಲಿ ಸದ್ದು ಮಾಡ್ತಿರುವ ಸಿಡಿ ಪ್ರಕರಣ ವಿಚಾರವಾಗಿ ತುಮಕೂರಲ್ಲಿ‌ ಮಾಜಿ ಸಚಿವ‌ ಟಿ.ಬಿ.ಜಯಚಂದ್ರ  ಯಾರ್ ಹತ್ರ ಇರಲ್ಲ ಅಂದ್ರು ನಮ್ ಸ್ನೇಹಿತ ವಿಶ್ವನಾಥ್ ಹತ್ರ ಸಿಡಿ ಇದ್ದೆ ಇರುತ್ತೆ ಎಂದು ಹೇಳಿದಾರೆ

ಪತ್ರಿಕೆಗಳಲ್ಲಿ ಸಿಡಿ ಇದೆ ಎಂಬುದು ಬರ್ತಿದೆ, ಯತ್ನಾಳ್ ಹೇಳ್ತಾರೆ ಸಿಡಿ ನನ್ ಹತ್ರ ಇದ್ದಿದ್ದಿದ್ರೆ ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ  ಆಗಿಬಿಡ್ತಿದ್ದೆ ಎಂತಾರೆ, ಇದೆಲ್ಲಾ ಹೊರಗೆ ಬರಲಿಕ್ಕೆ ಪ್ರಾರಂಭವಾಗ್ತಿದೆ ಬರಲಿ ಬಿಡಿ ಇಷ್ಟೇಲ್ಲಾ ಬಹಿರಂಗವಾಗಿ ಮಾತಾಡಿದ ಮೇಲೆ ಪೂರ್ಣವಾಗಿ ಹೊರಗೆ ಬಂದೇ ಬರುತ್ತೆ. ಮತ್ತು ಯಾರ್ ಹತ್ರ ಇರಲ್ಲ ಅಂದ್ರು ನಮ್ ಸ್ನೇಹಿತ ವಿಶ್ವನಾಥ್ ಹತ್ರ ಸಿಡಿ ಇದ್ದೆ ಇರುತ್ತೆ ಎಂದು ನಗುತ್ತಲ್ಲೆ ಕೀಚಾಯಿಸದರು.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಪಕ್ಷದ ಮುಖಂಡರು ಮಾತನಾಡ್ತಿರೋದು ನೋಡಿದ್ರೆ  ಅವರ ಬಳಿ ಸಿಡಿ ವ್ಯಾಪಕವಾಗಿ ಇದೆ ಎಂಬುದು ಅರ್ಥವಾಗುತ್ತೆ. ಅದರಲ್ಲಿ ಏನಿದೆ ಯಾರ್ ಯಾರ್ ಪಾತ್ರ ಮಾಡಿದಾರೆ,  ಏನೇನ್ ಆಕ್ಟ್ ಮಾಡಿದಾರೆ ನೋಡೋಣ ಅಮೇಲ್ ಮಾತಾಡೋಣ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿಕೆ ನೀಡಿದಾರೆ.

ಈ ಸಂಬಂಧ ಪೂರ್ತಿ ವಿಡೀಯೊ ಇದೆ ನೋಡಿ ಮತ್ತು ಹಾಗೆ ನಮ್ಮ ಚಾನಲ್ ನ ಸಬ್ಕ್ರೈಬ್ ಮಾಡಿ.

error: Content is protected !!