ಸಿರಾ ಕ್ಷೇತ್ರದ ಅನಿರೀಕ್ಷಿತ ಉಪಚುನಾವಣೆ ಮೇಲ್ನೋಟಕ್ಕೆ ಶಾಂತರೀತಿಯಿಂದ ನಡೆಯುತ್ತಿದೆ ಎಂದು ತೋರ್ಪಡಿಸಿಕೊಂಡರೂ, ಹಣದಬಲ, ಅಧಿಕಾರ ದುರುಪಯೋಗ ತೋಳ್ಬಲ ಜಾತಿ ಪ್ರಚೋದನೆಗಳು ಯತೇಚ್ಚವಾಗಿ ನಡೆಯುತ್ತಿದೆ, ಬಿ ಜೆ ಪಿ, ಜೆ ಡಿ ಎಸ್, ಕಾಂಗ್ರೇಸ್ ಮೂರು ಪಕ್ಷಗಳಿಂದ ನಡೆಯುತ್ತಿರುವ ಇಂತಹ ನಿಯಮಬಾಹಿರ ವರ್ತನೆಗಳನ್ನು ತಡೆಯುವಲ್ಲಿ ಚುನಾವಣಾ ಆಯೋಗ ವಿಪಲವಾಗಿದೆ. ಎಂದು ಸಿ ಪಿ ಐ ಪಕ್ಷದ ಅಭಿಪ್ರಾಯಿಸಿದೆ.
ಆಡಳಿತದಲ್ಲಿರುವ ಬಿ ಜೆ ಪಿ ಮಂತ್ರಿಗಳು ನೆರೆ ಸಂತ್ರಸ್ಥರ ಸಮಸ್ಯೆ ,ಕೊರೋನ ಸಮಸ್ಯೆ, ಬೆಲೆ ಏರಿಕೆ ತಡೆಗಡ್ಡುವಿಕೆ.,ಬೆಳೆ ನಾಷ್ಟ ಪರಿಹಾರ ಇತ್ಯಾದಿ ತಮ್ಮ ಶಾಸನ ಬದ್ದ ಕರ್ತವ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಉಪಚುನಾವಣೆಯ ಪಕ್ಷಾಂತರದಲ್ಲಿ ಮಗ್ನರಾಗಿದ್ದಾರೆ. ಸಿರಾ ಕ್ಷೇತ್ರದ ಚುನಾವಣಾ ಪಲಿತಾಂಶ ಸರ್ಕಾರದ ಅಳಿವು-ಉಳಿವಿನ ನಿರ್ಣಯಕ ಚುನಾವಣೆಯಲ್ಲ. ರಾಜ್ಯದ ರಾಜಕಾರಣದ ಮೇಲೆ ಯಾವುದೇ ನಿರ್ದಿಷ್ಟ ಪ್ರಭಾವವನ್ನು ಬೀರುವಂತದಲ್ಲ ಎಂಬ ವಾಸ್ತವವನ್ನು ಸಿರಾ ಕ್ಷೇತ್ರದ ಜನತೆ ಅರ್ಥಮಾಡಿಕೊಂಡು ಹಣದ ಹೊಳೆ ಹರಿಸುತ್ತಿರುವ ಬಿ ಜೆ ಪಿ, ಕಾಂಗ್ರೇಸ್ ,ಜೆ ಡಿ ಎಸ್ ಪಕ್ಷಗಳನ್ನು ಸೋಲಿಸಿ ಸಿ.ಪಿ.ಐ ಪಕ್ಷದ ಅಭ್ಯರ್ಥಿ ಗಿರೀಶ್ ರವರನ್ನು ಗೆಲ್ಲಿಸುವ ಮೂಲಕ ಇಡೀ ರಾಜ್ಯಕ್ಕೆ ಹೊಸ ಬದಲಾವಣೆಯ ಸಂದೇಶ ನೀಡಬೇಕೆಂದು ಸಿ ಪಿ ಐ ಮನವಿ ಮಾಡಿದೆ.
ಬಿ ಜೆ ಪಿ ಅಭ್ಯರ್ಥಿ ಗೆಲ್ಲಿಸಿದಲ್ಲಿ ಆರು ತಿಂಗಳಲ್ಲಿ ಕೆರೆಗೆ ನೀರು ಹರಿಸುವುದಾಗಿ ಹೇಳಿರುವ ಯಡೆಯೂರಪ್ಪ ನವರು, ನೀರಿಗಾಗಿ ಪಾದಯಾತ್ರೆ ಮಾಡುವುದಾಗಿ ಹೇಳುತ್ತಿರುವ ಕುಮಾರಸ್ವಾಮಿಗಳು ಒಂದು ವೇಳೆ ತಮ್ಮ ಅಭ್ಯರ್ಥಿಗಳು ಸೋತರೆ ನೀರು ಹರಿಸುವ ಪ್ರಯತ್ನ ಕೈ ಬಿಡುವರೆ ? ಎಂಬ ಪ್ರಶ್ನಗೆ ಉತ್ತರಿಸಬೇಕು. ನಮ್ಮ ಪಕ್ಷ ಗೆದ್ದರು ಸೋತರೂ ಮುಂದಿನ ದಿನಗಳಲ್ಲಿ ನೀರಿಗಾಗಿ ತೀವ್ರ ಹೋರಾಟ ರೂಪಿಸುತ್ತೇವೆ. ಈ ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ಪಕ್ಷಗಳು ನಮ್ಮ ಈ ನೀರಿನ ಹೋರಾಟದಲ್ಲಿ ಪಾಲ್ಗೊಳ್ಳುವರೇ….? ಎಂದು ಸಹ ಸ್ಟಷ್ಟಪಡಿಸಬೇಕೆಂದು ಸಿ ಪಿ ಐ ಒತ್ತಾಯಿಸಿದೆ.
ಸಿರಾ ಕ್ಷೇತ್ರದಲ್ಲಿನ ಸಮಗ್ರ ನೀರಾವರಿ ಯೋಜನೆಗಳು, ಸಿರಾ ಪಟ್ಟಣದ ಒಳ ಚರಂಡಿ, ನಿವೇಶನ ಹಾಗೂ ವಸತಿ ರಹಿತರ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್, ರಸ್ತೆ, ಶೇಂಗಾ ಬೆಳೆಗಾರರ ಪರವಾಗಿ ಇತ್ಯಾದಿ ನಾಗರಿಕ ಸಮಸ್ಯಗಳ ನಿವಾರಿಸುವ ಆಶ್ವಾಸನೆಗಳನ್ನು ಕಳೆದ ದಶಕದಿಂದ ಈ ಮೂರು ಪಕ್ಷಗಳು ಅಧಿಕಾರದಲ್ಲಿದ್ದಾಗ ಈಡೇರಿಸದೆ ಕೇವಲ ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಗೆಲ್ಲಬಹುದೆಂಬ ಭ್ರಮೆಯಲ್ಲಿರುವುದಕ್ಕೆ ಜನತೆ ತಕ್ಕ ಪಾಠ ಕಲಿಸಬೇಕೆಂದು ಸಿ ಪಿ ಐ ಮನವಿ ಮಾಡಿದೆ.