ಉತ್ತಮ ಸಮಾಜ ಮತ್ತು ಪರಿಸರ ನಿರ್ಮಾಣ ಮಾಡಲು ಕರೆ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ

ತುಮಕೂರು: ಉತ್ತಮ ಸಮಾಜ ಮತ್ತು ಪರಿಸರವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದು ಶ್ರೀಸಿದ್ಧಗಂಗೆ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ಅಮರಜ್ಯೋತಿ ನಗರದ ಸಾಯಿಬಾಬ ಮಂದಿರದ ಹಿಂಭಾಗದಲ್ಲಿರುವ ಈಡಿಗರ ಲೇಡಿಸ್ ಹಾಸ್ಟೆಲ್ ಕಾಂಪ್ಲೆಕ್ಸ್ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ವತಿಯಿಂದ ಪಾದಪೂಜೆ ಹಾಗೂ ವೆಬ್ಸೈಟ್, ವೀಡಿಯೋ ಕ್ಲಿಪ್ ಬಿಡುಗಡೆ ಮಾಡಿ ಆಶೀರ್ವಚನ ನೀಡಿದ ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ, ಅಷ್ಟೇ ವೇಗವಾಗಿ ತುಮಕೂರು ಸಹ ಬೆಳೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಉತ್ತಮ ಸಮಾಜ ಮತ್ತು ಪರಿಸರ ನಿರ್ಮಾಣ ಮಾಡುವುದರಲ್ಲಿ ತನ್ನದೇ ಆದ ಕನಸನ್ನು ನನಸು ಮಾಡುವುದೇ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ಉದ್ದೇಶವನ್ನು ಹೊಂದಿರುವುದು ಸಂತಸದ ವಿಚಾರವಾಗಿದೆ ಎಂದು ಶ್ಲಾಘಿಸಿದರು. ಮಧ್ಯಮ ವರ್ಗದವರು ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ಹೊಂದಿರುತ್ತಾರೆ. ಅಂತಹ ಕನಸುನನಸು ಮಾಡುವ ಉದ್ದೇಶವನ್ನು ಹೊಂದಿರುವ ಸಂಸ್ಥೆಯು ಗುಣಮಟ್ಟದ ಮನೆಗಳನ್ನು ದೀರ್ಘಕಾಲ ಮನೆಗಳನ್ನು ನಿರ್ಮಾಣ ಮಾಡುವಂತೆ ಗಮನಹರಿಸಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ಮಾಲೀಕರಾದ ಕೆ.ಮಂಜುನಾಥ್ರವರು ಮಾತನಾಡುತ್ತಾ ಗ್ರಾಹಕರು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಕನಸನ್ನು ಹೊಂದಿರುತ್ತಾರೆ ಮತ್ತು ಬಗ್ಗೆ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಹಿನ್ನೆಲೆಯಲ್ಲಿ ನಾವು ಕಳೆದ 29 ವರ್ಷಗಳಿಂದ ಗ್ರಾಹಕರ ಕನಸಿನ ಮನೆಯನ್ನು ಅತ್ಯಾಕರ್ಷಕ ದರದಲ್ಲಿ ನಿರ್ಮಾಣ ಮಾಡಿಕೊಡುತ್ತಾ ಬಂದಿದ್ದೇವೆ, ನಾವು ಕೇವಲ ಪ್ರತಿ ಚದರಡಿಗೆ 1700 ರೂಪಾಯಿ ದರದಲ್ಲಿ ಮನೆಯನ್ನು ನಿರ್ಮಾಣ¨ ಮಾಡಿಕೊಡುತ್ತಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.