ರಾಜ್ಯ ಆಡಳಿತದಲ್ಲಿ ಅನ್ಯಾಯಗಳು | ಇಡೀ ದೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಮರಣ ಶಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ | Vishwa kannadi

ತುಮಕೂರು: ಇಡೀ ದೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಮರಣ ಶಾಸನವಾಗಿದೆ ಮತ್ತು ರಾಜ್ಯ ಆಡಳಿತದಲ್ಲಿ ಅನ್ಯಾಯಗಳು ನಡೆಯುತ್ತಿವೆ ಎಂದು ಕೆಪಿಸಿಸಿ ರಾಜ್ಯಾಧಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.

ನಮ್ಮ ಕಾಂಗ್ರೆಸ್ ಪಕ್ಷವೂ ಕೂಡ 20 ತಾರೀಖು ರೈತರ ಪರವಾಗಿ ಬೆಂಬಲ ವ್ಯಕ್ತಪಡಿಸುತ್ತೇವೆ ಜೊತೆಗೆ ಫ್ರೀಡಂ ಪಾರ್ಕ್ ಸಂಗುಳ್ಳಿ ರಾಯಣ್ಣ  ಸರ್ಕಲ್ ನಿಂದ ರಾಜಭವನಕ್ಕೆ ಚಲೋ ಹಮ್ಮಿಕೊಂಡಿದ್ದೇವೆ. ಇಡೀ ರಾಷ್ಟ್ರದಲ್ಲಿ ಇಂತಹ ರೈತರ ದೊಡ್ಡ ಹೋರಾಟ ನಡೆದಿರಲಿಲ್ಲ, ಕಮಿಟಿ ಮಾಡಿರೋದನ್ನ ರೈತರು ದಿಕ್ಕರಿಸಿದ್ದರೆ ಮತ್ತು ನಮಗೆ ಅವಶ್ಯಕತೆ ಇಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ. ಇಡೀ ದೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಮರಣ ಶಾಸನವಾಗಿದೆ ಇದನ್ನ ವಾಪಸ್ ಪಡೆಯಬೇಕು ಎಂದು ನಾವೆಲ್ಲಾ ಹೋರಾಟ ಮಾಡ್ತೇವೆ.

ರಾಜ್ಯದ ಆಡಳಿತದಲ್ಲಿ ಅನ್ಯಾಯಗಳು ನಡೆಯುತ್ತಿದೆ, ಬೆಲೆ ಏರಿಕೆಗಳು, ಪೆಟ್ರೋಲ್ ಡಿಸೆಲ್ ಪ್ರಾಪರ್ಟಿ ಟಾಕ್ಸ್ ಇವೆಲ್ಲ ಕೂಡ ಕೊರೊನಾ ಸಂದರ್ಭದಲ್ಲಿ ಹೆಚ್ಚು ಮಾಡಿರೋದು ಗಮನಸಿದ್ದೇವೆ.ಸರ್ಕಾರ ಹಾಗೂ ದೇಶದ ಜನರನ್ನ ಗಮನ ಸೆಳೆಯಬೇಕು ಎಂದು ಬಿಜೆಪಿ ಸಾರ್ವಜನಿಕರ ಅಭಿಪ್ರಾಯಗಳ ವಿರೋಧವಾಗಿ ಸ್ವಂತ ಅಜೆಂಡಾಗಳ ಮೇಲೆ ಸರ್ಕಾರವನ್ನ ನಡೆಸುತ್ತಿವೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗಲಿದೆ ಬಿಜೆಪಿ ಅವರು ಏನ್ ಬೇಕಾದ್ರು ಹೇಳಿಕೊಳ್ಳಲಿ ಕಾಂಗ್ರೆಸ್ ನ್ನ ಏನೂ ಮಾಡೋಕ್ ಆಗಲ್ಲ, ಪ್ರಾದೇಶಿಕ ಸಂಸ್ಕೃತಿಗಳು ಭಾಷೆ ಯಾವುದೂ ಬೇಕಿಲ್ಲ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರದ ಎಂಪಿಗಳು ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ

ಎಂದು ಶ್ರಿ ಸಿದ್ದಗಂಗಾ ಮಠದಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಈ ಸಂಧರ್ಭದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಕೆಂಚಮಾರಯ್ಯ ಇತರು ಇದ್ದರು.

ಈ ಸಂಬಂಧ ಪೂರ್ತಿ ವಿಡೀಯೊ ಇದೆ ನೋಡಿ ಮತ್ತು ಹಾಗೆ ನಮ್ಮ ಚಾನಲ್ ನ ಸಬ್ಕ್ರೈಬ್ ಮಾಡಿ.

Leave a Reply

Your email address will not be published. Required fields are marked *