ಬಿಜೆಪಿಗೆ ಬಂಡಾಯದ ಬಿಸಿ

ತುಮಕೂರು: ಐದು ಜಿಲ್ಲೆ ಗಳನ್ನು ಒಳಗೊಂಡ ಆಗ್ನೇಯ ಪದವಿಧರರ ಕ್ಷೇತ್ರದ ಚು ನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಂಡಾಯದ ಬಿಸಿ ಹೆಚ್ಚಾಗಿದ್ದು, ಪಕ್ಷದ ಅಭ್ಯರ್ಥಿ ಯವಿರುದ್ದ ಇಬ್ಬರು ನಾ ಮಪತ್ರ ಸಲ್ಲಿಸುವ ಮೂಲಕ ಪಕ್ಷದ ಹೈ ಕಮಾಂಡ್‍ಗೆ ತೀವ್ರ ತಲೆ ನೋವು ತಂದಿದ್ದಾರೆ. ತುಮಕೂರು, ಚಿತ್ರದುರ್ಗ,
ದಾವಣೆಗೆರೆ, ಚಿಕ್ಕಬಳ್ಳಾಪುರ

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ


ಮತ್ತು ಕೋಲಾರ ಜಿಲ್ಲೆಗಳನ್ನು ಒಳ ಗೊಂಡ ಸುಮಾ ರು 1.06 ಲಕ್ಷ ಮತದಾರರನ್ನು ಹೊಂದಿರುವ ಆಗ್ನೇಯ ಪದ ವಿಧರರ ಕ್ಷೇತ್ರಕ್ಕೆ ಅಕ್ಟೋಬರ್ 28 ರಂದು ಮತದಾನ ನಡೆಯಲಿ ದ್ದು, ಈಗಾಗಲೇ ಅಧಿಸೂಚ ನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆಯೂ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ರಮೇಶ್ ಬಾಬು ಅವರನ್ನು ಕಣಕ್ಕೆ ಇಳಿಸಿದರೆ ಜೆಡಿಎಸ್ ನಿಂದ ಚೌಡರೆಡ್ಡಿ ತೂಪಲ್ಲಿ ಅವರ ನ್ನು ಕಣಕ್ಕೆ ಇಳಿಸಿದೆ. ಆದರೆ ಬಿಜೆಪಿಯಲ್ಲಿ ಇದುವರೆಗೂ ಈ ಕ್ಷೇತ್ರದ ಅಭ್ಯರ್ಥಿಗಳೆಂದೇ ಬಿಂಬಿತರಾಗಿದ್ದ ತುಮಕೂರಿನ ಎಸ್.ಆರ್.ಎಸ್ ಶಿಕ್ಷಣ ಸಂಸ್ಥೆಯ ಮಾಲೀಕ ಡಾ. ಹಾಲೆನೂರು ಲೇಪಾಕ್ಷ, ಪೆಪ್ಸಿ ಬಸವರಾಜು, ಸುರೇಶ್, ಶ್ರೀನಿವಾಸ್ ಅವರುಗಳನ್ನು ಹೊರತು ಪಡಿಸಿ, ಶಿರಾ ಪಟ್ಟಣದ ಪ್ರೆಸಿಡೆನ್ಸಿ ಶಾಲೆಯ ಕಾರ್ಯದರ್ಶಿ ಚಿದಾನಂದಗೌಡ ಅವರನ್ನು ಕಣಕ್ಕೆ ಇಳಿಸಲು ಮುಂದಾಗಿರುವು ದಲ್ಲದೆ, ಅಧಿಕೃತ ಅಭ್ಯರ್ಥಿ ಎಂದೇ ಬಿಂಬಿಸಿ, ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಪ್ರಚಾರ ನಡೆಸುತ್ತಿರುವುದರಿಂದ ಟಿಕೇಟ್ ಸಿಗದೆ ಹತಾಶರಾಗಿರುವ ಡಾ. ಹಾಲೆನೂರು ಲೇಪಾಕ್ಷ ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದ ಎ.ಕೃಷ್ಣಪ್ಪ ಅವರ ಅಳಿಯ, ಶಾಸಕಿ ಪೂರ್ಣೀಮ ಅವರ ಗಂಡ ಶ್ರೀನಿವಾಸ್ ಈಗಾಗಲೇ ಬಂಡಾ ಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಂಡಾಯ ಅಭ್ಯರ್ಥಿ ಗಳಾಗಿ ನಾಮಪತ್ರ ಸಲ್ಲಿಸಿರುವ ಹಾಲೇ ನೂರು ಲೇಪಾಕ್ಷ ಅವರು ತುಮಕೂ ರು ಲೋಕಸಭಾ ಕ್ಷೇತ್ರದ ಇಂದಿನ ಸದಸ್ಯರಾದ ಜಿ.ಎಸ್ ಬಸವರಾಜು ಅವರ ಕಟ್ಟಾ ಅನುಯಾಯಿಯಾಗಿದ್ದು, ಹಲವಾರು ವರ್ಷಗಳಿಂದ ಆಗ್ನೇಯ ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಈ ಬಾರಿ ವೈ.ಎ.ನಾರಾಯಣಸ್ವಾಮಿ ಅವರಿಗೆ ನೀವು ಬಿಟ್ಟುಕೊಟ್ಟರೆ, ಮುಂಬರುವ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ನಿನಗೆ ಟಿಕೇಟ್ ನೀಡುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಭರವಸೇಡಿದ್ದರು. ಇದಕ್ಕೆ ಜಿ.ಎಸ್.ಬಸವರಾಜು ಅವರ ಸಾಕ್ಷಿ. ಬಿ.ಎಸ್.ವೈ ಮಾತಿಗೆ ತಪ್ಪಿರುವ ಹಿನ್ನೆಲೆಯಲ್ಲಿ ನಾನು ಬೆಂಬಲಿಗರ ಮತ್ತು ಮತದಾರರ ಒತ್ತಾಯದ ಮೇರೆಗೆ ಕಣಕ್ಕೆ ಇಳಿಯುತ್ತಿದ್ದು,ಯಾವುದೇ ಕಾರಣಕ್ಕೂ ಹಿಂದೆ ಸರಿ ಯುವುದಿಲ್ಲ ಎಂದು ಮಾಧ್ಯಮ ಗಳಿಗೆ ಸ್ಪಷ್ಟ ಪಡಿಸಿದ್ದಾರೆ.
ಇನ್ನೂ ಮಾಜಿ ಸಚಿವ ಎ. ಕೃಷ್ಣಪ್ಪ ಅವರ ಅಳಿಯ, ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣೀಮ ಅವರ ಪತಿ ಡಿ.ಟಿ. ಶ್ರೀನಿವಾಸ್ ಸಹ ಬುಧವಾರ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ನನಗೂ ಸಹ ಆಗ್ನೇಯ ಪದವಿಧರ ಕ್ಷೇತ್ರದ ಟಿಕೇಟ್ ನೀಡುವ ಭರವಸೆ ನೀಡಿದ್ದು, ಈ ಕೈಕೊಟ್ಟಿದ್ದಾರೆ, ಇವರನ್ನು ನಂಬಿ ಸುಮಾರು 45 ಸಾವಿರ ಜನರನ್ನು ಮತದಾರರನ್ನಾಗಿ ನೊಂದಾಯಿಸಿದ್ದೆ.ನಾನು ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಕೆ.ಎಂ.ಸುರೇಶ್ ಸಹ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದು, ಪೆಪ್ಸಿ ಬಸವರಾಜು ಸಹ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಭಿ ನ್ನಮತ ಶಮನಗೊಳ್ಳುವ ಯಾವ ಲಕ್ಷಣಗಳು ಕಂಡು ಬ ರುತ್ತಿಲ್ಲ. ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಕಳೆದ ಲೋಕಸಭಾ ಚುನಾವಣೆಯ ವೇಳೆ ವಲಸೆ ಬಂದ ಚಿದಾನಂದಗೌಡ ಅವರಿಗೆ ಟಿಕೇಟ್ ನೀಡಿರುವುದು ಭಿನ್ನಮತಿಯ ಸಿಟ್ಟು ನೆತ್ತಿಗೆರಲು ಕಾರಣ. ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಮತ್ತು ಮುಖಂಡರನ್ನು ಬಾಯಿಗೆ ಬಂದಂತೆ ಬೈಯು ತ್ತಾ, ಪ್ರತಿಭಟನೆಗೆ ಮಕ್ಕಳ ನ್ನು ಕಳುಹಿಸುವಂತೆ ಕೋರಿದ ಎಬಿವಿಪಿ ಕಾರ್ಯಕರ್ತರನ್ನು ಶಾಲೆಯ ಕಾಂಪೌಂಡಿನಿಂದ ಹೊರಗೆ ಕಳುಹಿಸಿದ ವ್ಯಕ್ತಿಗೆ ಟಿಕೇಟ್ ನೀಡಿರುವುದು ಸರಿಯಲ್ಲ ಎಂಬುದು ಕೆಲ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಐದು ಜಿಲ್ಲೆಗಳಿಗೆ ಸಂಬಂಧಿಸಿದ ಐದು ಲೋಕಸಭಾ ಕ್ಷೇತ್ರ ಗಳಲ್ಲಿಯೂ ಬಿಜೆಪಿ ಸಂಸದರೇ ಅಧಿಕಾರದಲ್ಲಿ ಇದ್ದಾರೆ,ಅಲ್ಲದೆ ಸುಮಾರು 43 ವಿಧಾನಸಭಾ ಕ್ಷೇತ್ರಗಳಲ್ಲಿ 14 ರಲ್ಲಿ ಬಿಜೆಪಿ ಶಾಸಕರಿದ್ದಾರೆ.ಹಲವರು ಮಂತ್ರಿಗಳು ಇರುವುದರಿಂದ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.
ಶಿರಾ ವಿಧಾನಸಭಾ ಚುನಾವಣೆ ಮತ್ತು ಆಗ್ನೇಯ ಪದವಿಧರರ ಕ್ಷೇತ್ರ ಚುನಾವಣೆ ಒಂದಕ್ಕೊಂದು ಪೂರಕವಾಗಿದ್ದು,ಪಕ್ಷದ ನಿಷ್ಠಾವಂತರೇ ಪಕ್ಷದ ವಿರುದ್ದ ಸ್ಪರ್ಧಿಸುವುದರಿಂದ ಎರಡು ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇರುವ ಕಾರಣ. ಕಮಲ ನಾಯಕರು ಈ ಸಮಸ್ಯೆಗೆ ಹೇ ಗೆ ಬಗೆಹರಿಸುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

error: Content is protected !!