ಗ್ರಾಮಸ್ಥರಿಗೆ ದಿನಸಿ ಕಿಟ್ ವಿತರಿಸಿದ ಗ್ರಾಮ ಪಂಚಾಯತ್ ಸದಸ್ಯ ಬಿ.ಲೋಕೇಶ್ | ವಿಶ್ವ ಕನ್ನಡಿ

ತುಮಕೂರು: ಶಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಾರೋಗೆರೆ ಗಡಿನಾಡು ಗ್ರಾಮದಲ್ಲಿ ಪತ್ರಕರ್ತ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಲೋಕೇಶರವರು ಗ್ರಾಮದಲ್ಲಿನ ಬಡವರು ನಿರ್ಗತಿಕರು ಸೇರಿದಂತೆ ಲಾಕ್ ಡೌನ್ನಿಂದ ತೀರಾ ಸಂಕಷ್ಟಕ್ಕೀಡಾದ ಕುಟುಂಬಗಳನ್ನು ಗುರುತಿಸಿ ಲೋಕೇಶ್ ಅವರು ತಮ್ಮ ಸ್ವಂತ ಹಣದಿಂದ ಕುಟುಂಬಕ್ಕೆ ಅಗತ್ಯವಾದ ದಿನಸಿ ಪದಾರ್ಥಗಳ ಕಿಟ್ ಹಂಚುವ ಮೂಲಕ ಕುಟುಂಬಗಳಿಗೆ ನೆರವಾಗಿದ್ದಾರೆ. ಇನ್ನು ಬರಗೂರು ಗ್ರಾಮ ಪಂಚಾಯಿತಿ ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದೆ ಗುರುತಿಸಲ್ಪಟ್ಟಿದ್ದು ಪ್ರತಿದಿನ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ, ಇತರ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಟ ಹೊಂದುವ ಮೂಲಕ ಕೊರೊನಾ ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಅನುಸರಿಸುವ ಮೂಲಕ ಗ್ರಾಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.