ಆರೋಗ್ಯ ಕನ್ನಡಿ: ನಿಮ್ಮ ಆರೋಗ್ಯವನ್ನು ನಿಮ್ಮ ನಾಲಿಗೆ ಮೂಲಕ ತಿಳಿಯಬಹುದು ಹೇಗೆ ಗೋತ್ತ? | ವಿಶ್ವ ಕನ್ನಡಿ

ಸಾಮಾನ್ಯವಾಗಿ ಜ್ವರ ಹಾಗೂ ಇನ್ನೂ ಬೇರೆ ಕಾಯಿಲೆಗಳು ಬಂದ್ರೆ ಮೊದಲು ನಾವು ಡಾಕ್ಟರ್ ಬಳಿ ಹೋಗುತ್ತೇವೆ. ಆ ವೇಳೆಯಲ್ಲಿ ವೈದ್ಯರು ನಿಮ್ಮ ನಾಲಿಗೆಯನ್ನು ಪರೀಕ್ಷಿಸುವುದನ್ನ ನೀವು ಕೂಡ ಗಮನಿಸಿರುತ್ತೀರಿ. ಏಕೆ ಡಾಕ್ಟರ್ ನಾಲಿಗೆ ಪರೀಕ್ಷಿಸುತ್ತಾರೆ? ಇದರ ಬಗ್ಗೆ ತಿಳಿಸುತ್ತೆನೆ ಮುಂದೆ ಓದಿ.

ಆರೋಗ್ಯವಂತರ ನಾಲಿಗೆಯ ಬಣ್ಣವು ಸಾಮಾನ್ಯವಾಗಿ ಗುಲಾಬಿ ಬಣ್ಣದಲ್ಲಿರುತ್ತದೆ. ನಮ್ಮ ದೇಹದಲ್ಲಿ ಆಮ್ಲಜನಕದ ಕೊರತೆ ಇದ್ದರೆ ನಾಲಿಗೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಮತ್ತು ಜೀವಸತ್ವಗಳ ಕೊರತೆಯಿದ್ದರು ನಾಲಿಗೆಯಲ್ಲಿ ಕೆಂಪು ಉರಿಯೂತ ಕಂಡು ಬರುತ್ತದೆ.

ಆಗಾಗಿ ಇದಕ್ಕೆ ಮುಖ್ಯ ಕಾರಣ ನಾಲಿಗೆಯ ಮೇಲೆ ನಿಮ್ಮ ಆರೋಗ್ಯದ ಗುಟ್ಟುಗಳು ಪ್ರತಿಫಲನಗೊಳ್ಳುತ್ತದೆ. ಇದೇ ಕಾರಣದಿಂದ ಡಾಕ್ಟರ್ಗಳು ಆರಂಭದಲ್ಲಿ ನಾಲಿಗೆ ಲಕ್ಷಣಗಳನ್ನು ಪರೀಕ್ಷಿಸುತ್ತಾರೆ.

ಬ್ಯಾಕ್ಟೀರಿಯಾದಿಂದ ಉಂಟಾಗುವ ಹಾಗೂ ಶಿಲೀಂದ್ರಗಳಿಂದ ಕಂಡು ಬರುವ ಸೋಂಕಿನಿಂದ ಇವು ಕಂಡು ಬರುತ್ತವೆ. ಅದಕ್ಕಾಗಿ ಹಲ್ಲುಗಳ ಜೊತೆ ಪ್ರತಿನಿತ್ಯ ನಾಲಿಗೆಯನ್ನು ಶುಚಿಗೊಳಿಸಬೇಕೆಂದು ಡಾಕ್ಟರ್ ತಿಳಿಸುತ್ತಾರೆ.