ರಾಜ್ಯದ ಬಲಾಢ್ಯ ಸಮುದಾಯ 2ಎ ಪ್ರವರ್ಗಕ್ಕೆ ಸೇರ್ಪಡೆಯಾದರೆ ಹಿಂದುಳಿದವರ ಹಕ್ಕು ಕಸಿದಂತೆ: ಅಹಿಂದ ಜಿಲ್ಲಾ ಒಕ್ಕೂಟ

ಗುಬ್ಬಿ: ರಾಜ್ಯದ ಬಲಾಢ್ಯ ಸಮುದಾಯದವರು 2 ಎ ಪ್ರವರ್ಗಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಗಡುವು ನೀಡಿ ಹಿಂದುಳಿದವರ ಹಕ್ಕನ್ನು ಕಸಿಯುತ್ತಿದ್ದಾರೆ ಎಂದು ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿ ಅಹಿಂದ ಜಿಲ್ಲಾ ಒಕ್ಕೂಟ ಆರೋಪಿಸಿದೆ.

ದೇವರಾಜು ಅರಸರ ಆಡಳಿತದಲ್ಲಿ ಹಿಂದುಳಿದ ಜನಾಂಗಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದರು ಅದಾದ ನಂತರ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು ಹೊರತು ಪಡಿಸಿದರೆ ಇನ್ಯಾವುದೇ ಪಕ್ಷ ಅಥವಾ ನಾಯಕರು ಹೋರಾಟ ಮಾಡಿದ್ದಿಲ್ಲ ಎಂದು ಕಾಡು ಗೊಲ್ಲರ ಜಿಲ್ಲಾಧ್ಯಕ್ಷ ಮತ್ತು ಅಹಿಂದ ಜಿಲ್ಲಾ ಒಕ್ಕೂಟದ ಸಂಚಾಲಕ ಚಂದ್ರಶೇಖರ್ ಅಸಮಾಧಾನ ಹೊರಹಾಕಿದರು .

ಹಿಂದುಳಿದ ವರ್ಗದ ಸರ್ಕಾರಿ ನೌಕರರು ದೇವರಾಜ ಅರಸು ಅವರ ಹೆಸರು ಹೇಳಿಕೊಂಡು ಅನ್ನ ತಿನ್ನ ಬೇಕು.
ಹಿಂದುಳಿದ ವರ್ಗದ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಿ ಬೇಕು ಆದರೆ ಇಂದು ಸ್ಕಾಲರ್ ಶಿಪ್ ತೆಗೆದಿರುವ ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಿ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ನೀಡಬೇಕು ಆಗ ಸರ್ಕಾರಿ ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಂತಾಗುತ್ತದೆ. ರಾಜ್ಯದಲ್ಲಿ ರಾಜಕೀಯ ಶಕ್ತಿಗಳು ಹಿಂದುಳಿದ ವರ್ಗಗಳನ್ನು ಒಂದಾಗಲು ಬಿಡುತ್ತಿಲ್ಲ ಇದು ವಿಷಾಧನೀಯ, ಚುನಾವಣೆ ನಡೆಯುವ ಸಂದರ್ಭದಲ್ಲಿ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ಪಕ್ಷಾತೀತವಾಗಿ ಚುನಾಯಿಸಲು ಒಕ್ಕೂಟ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ದನಿಯಾ ಕುಮಾರ್ ತಿಳಿಸಿದರು.